2109-20ನೇ ಸಾಲಿನ ಗುರುಚೇತನ ತರಬೇತಿಗಳು ದಿನಾಂಕ : 16.09.2019 ರಿಂದ ಪ್ರಾರಂಭಗೊಳ್ಳುತ್ತವೆ.

About Guruchetana

ಶಿಕ್ಷಕರ ವೃತ್ತಿಪರ  ಅಭಿವೃದ್ಧಿಗಾಗಿ ಅಖಂಡ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆನ್‍ಲೈನ್‍ ಮೂಲಕ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಆಶಯದಿಂದ ಈ ವಿನೂತನ ಕಾರ್ಯಕ್ರಮ ನಡೆಸಲಾಗುತ್ತಿದೆ. ಗುರುಚೇತನ ಕಾರ್ಯಕ್ರಮದಡಿಯಲ್ಲಿ ಟಿ.ಟಿ.ಎಂ.ಎಸ್ ತಂತ್ರಾಂಶದ ಸಹಾಯದಿಂದ 2017-18ನೇ ಸಾಲಿನಲ್ಲಿ ಯಶಸ್ವಿಯಾಗಿ ನಮ್ಮ ಜಿಲ್ಲೆಯ 1500 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. 2018-19ನೇ ಸಾಲಿನಲ್ಲಿ ಹೊಸ ಮಾಡ್ಯೂಲ್ ಗಳು ಸೇರ್ಪಡೆಗೊಂಡಿದ್ದು ಕನ್ನಡ ಮಾಧ್ಯಮದಲ್ಲಿ ಒಟ್ಟು 42 ಮಾಡ್ಯೂಲ್‍ಗಳು ಇವೆ. ಕನ್ನಡ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ನಲಿಕಲಿ ಮತ್ತು ಶೈಕ್ಷಣಿಕ ದೃಷ್ಠಿಕೋನ  ಎಂಬ 7 ವಿಷಯಗಳಲ್ಲಿ ಪ್ರತಿ ವಿಷಯಕ್ಕೆ 6 ಮಾಡ್ಯೂಲ್‍ಗಳು ಇವೆ. 2018-19ನೇ ಸಾಲಿನಲ್ಲಿ ಉರ್ದು ಹಾಗೂ ಮರಾಠಿ ಭಾಷೆಯಲ್ಲೂ ಸಹ ಮಾಡ್ಯೂಲ್‍ಗಳು ಸೇರ್ಪಡೆಗೊಂಡಿವೆ. ಪ್ರತೀ ಮಾಡ್ಯೂಲ್‍ನ ತರಬೇತಿ ನೀಡುವಾಗ ಬ್ಲಾಕ್ ಹಂತ ಅಥವಾ ಜಿಲ್ಲಾ ಹಂತದಲ್ಲಿ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಆಯೋಜಿಸಲಾಗುತ್ತದೆ. ತರಬೇತಿಯ ಕುರಿತು ಧನಾತ್ಮಕ ಭಾವನೆಯನ್ನು ಹಲವಾರು ಶಿಕ್ಷಕರು ವ್ಯಕ್ತಪಡಿಸಿದ್ದಾರೆ. ಈ ವಿನೂತನ ಕಾರ್ಯಕ್ರಮದ ಸಾರಥ್ಯ ವಹಿಸಿರುವ ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಆಯುಕ್ತರು, ಮಾನ್ಯ ಡಿ.ಎಸ್.ಇ.ಆರ್.ಟಿ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರೆಲ್ಲರಿಗೂ ಅನಂತ ಧನ್ಯವಾದಗಳು.

      ಶ್ರೀ ಚಂದ್ರಶೇಖರ್                                                                                                             ಶ್ರೀ ಮಹದೇವಪ್ಪ
ಗುರುಚೇತನ ನೋಡಲ್ ಅಧಿಕಾರಿ                                                                                                                           ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ)
              ಮೈಸೂರು                                                                                                                                                         ಮೈಸೂರು